ರ್ಯಾಡಿಕಲ್
ಒಂದು ಪೂರ್ಣ ಘಟಕವೋ ಎಂಬಂತೆ ರಾಸಾಯನಿಕ ಕ್ರಿಯೆಗಳಲ್ಲಿ ವಿಘಟಿಸದೇ ಪಾಲ್ಗೊಳ್ಳುವ ಕಾರ್ಬನಿಕ ಅಥವಾ ಅಕಾರ್ಬನಿಕ ಪರಮಾಣು ಗುಚ್ಛ; ಸಾಮಾನ್ಯವಾಗಿ ಯಾವುದಾದರೂ ಒಂದು ಸಂಯುಕ್ತದ ಅಣುವಿನ ಘಟಕವಾಗಿಯೇ ಅಸ್ತಿತ್ವ; ಸ್ವತಂತ್ರ ಸ್ಥಿತಿಯಲ್ಲಿ ಅಲ್ಪಾಯುವಾದುದರಿಂದ ಅಲಭ್ಯ. ಅನಧೀನ(ಫ್ರೀ) ರ್ಯಾಡಿಕಲ್ ಎಂಬ ಹೆಸರೂ ಇದೆ. ಇವು ಕನಿಷ್ಠ ಒಂದಾದರೂ ಜೋಡಿಗೂಡದ (ಅನ್‍ಪೇರ್ಡ್) ಎಲೆಕ್ಟ್ರಾನ್ ಇರುವ ಅಣುಗಳು. ಉದಾ: ಮೀಥೈಲ್ (ಅಊ3), ಈಥೈಲ್ (ಅ2ಊ5), ಸಲ್ಫೇಟ್ (Sಔ4), ಕ್ಲೋರೇಟ್ (ಅಟಔ3), ಕಾರ್ಬಾಕ್ಸಿಲ್ (ಅಔಔಊ). 

ಬಹುತೇಕ ಅಣುಗಳಲ್ಲಿ ಎಲೆಕ್ಟ್ರಾನುಗಳು ಸರಿಸಂಖ್ಯೆಯಲ್ಲಿ ಇರುತ್ತವೆ. ಪ್ರಸಾಮಾನ್ಯವಾಗಿ, ಈ ಅಣುಗಳ ಘಟಕ ಪರಮಾಣುಗಳನ್ನು ಬಂಧಿಸಿರುವ ಸಹವೇಲೆನ್ಸೀಯ ಬಂಧಗಳಲ್ಲಿ ಉಭಯಸಾಮಾನ್ಯ ಎಲೆಕ್ಟ್ರಾನ್ ಜೋಡಿ ಇರುತ್ತದೆ. ರ್ಯಾಡಿಕಲ್‍ಗಳನ್ನು ಪ್ರಸಾಮಾನ್ಯ ಎಲೆಕ್ಟ್ರಾನ್-ಜೋಡಿ ಬಂಧದ ಸೀಳಿಕೆಯಿಂದ ಉದ್ಭವಿಸಿದ ಅಣುಗಳು ಎಂದು ಪರಿಗಣಿಸಬಹುದು. ಸೀಳಿಕೆಯ ವ್ಯುತ್ಪನ್ನವೇ ಜೋಡಿಗೂಡದ ಒಂದು ಎಲೆಕ್ಟ್ರಾನ್ ಇರುವ ಎರಡು ಪ್ರತ್ಯೇಕ ಅಣುಗಳು, ಅರ್ಥಾತ್ ರ್ಯಾಡಿಕಲ್‍ಗಳು. ಜೋಡಿಗೂಡದ ಎಲೆಕ್ಟ್ರಾನ್ ಇರುವುದರಿಂದ, ಇವು ಬಲು ಕ್ರಿಯಾಶೀಲ.
ಒಂದು ರ್ಯಾಡಿಕಲ್ ಇನ್ನೊಂದರೊಂದಿಗೆ ಅಥವಾ ಸ್ವತಂತ್ರ ಎಲೆಕ್ಟ್ರಾನು ಗಳಿರುವ ಒಂಟಿ ಪರಮಾಣುಗಳೊಂದಿಗೆ ಸಂಯೋಗವಾಗಿ ಪ್ರಸಾಮಾನ್ಯ ಅಣುಗಳಾಗುತ್ತವೆ. ಪ್ರಸಾಮಾನ್ಯ ಅಣುಗಳೊಂದಿಗೆ ವರ್ತಿಸಿ ಹೊಸ ರ್ಯಾಡಿಕಲ್‍ಗಳನ್ನೂ ಉತ್ಪಾದಿಸುವುದುಂಟು. ವಿಶೇಷ ಸನ್ನಿವೇಶಗಳಲ್ಲಿ ವೇಲೆನ್ಸಿ 2 ಇರುವ ಡೈರ್ಯಾಡಿಕಲ್‍ಗಳನ್ನು ರೂಪಿಸಬಹುದು. ಯುಕ್ತ ಉಪಾಧಿಗಳಿದ್ದರೆ ಸಾಪೇಕ್ಷವಾಗಿ ದೀರ್ಘಾಯುಷಿಗಳಾದ ಸ್ಥಿರ ರ್ಯಾಡಿಕಲ್‍ಗ ಳನ್ನು ಪಡೆಯಲು ಸಾಧ್ಯ (ಉದಾ: ಟ್ರೈಫೀನೈಲ್‍ಮೀಥೈಲ್).	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ